ಕನ್ನಡ ಕವಿಗಳೊಂದಿಗೆ ಒಂದು ಸಂಜೆ...

ಅದೊಂದು ಕೆಲಸದ ದಿನದ  ಸಂಜೆ. ಅದೂ ಸಾಹಿತ್ಯದ ಕಾರ್ಯಕ್ರಮ. ಎಷ್ಟು ಜನ ಬಂದಾರು? ಆಕರ್ಷಣೆಗೋಸ್ಕರ ಒಂದು ನೃತ್ಯ ಕಾರ್ಯಕ್ರಮವನ್ನೂ ಇಡಲಾಗಿತ್ತು. ಅಬ್ಬಬ್ಬಾ ಎಂದರೆ 30 ಅಥವ 35 ಬರಬಹುದು ಎಂದು,

ಅದಕ್ಕೆ ತಕ್ಕಂತೆ ಕುರ್ಚಿಗಳನ್ನು ಹಾಕಲಾಗಿತ್ತು, ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಆಶ್ಚರ್ಯಕರವಾಗಿ 60ಕ್ಕೂ ಹೆಚ್ಚು ಸಾಹಿತ್ಯಾಸಕ್ತರು ಬಂದಿದ್ದು ಈ ಸಾಹಿತ್ಯ ಕಾರ್ಯಕ್ರಮದ ವಿಶೇಷವಾಗಿತ್ತು. ಸಾಹಿತ್ಯ ಕಾರ್ಯಕ್ರಮದ ವಿಶೇಷ ಕವಿಗಳು

ಡಾ|| ಎಚ್. ಎಸ್. ವೆಂಕಟೇಶಮೂರ್ತಿ ಹಾಗೂ ಬಿ. ಆರ್. ಲಕ್ಷ್ಮಣರಾವ್. ಸಾಹಿತ್ಯದ ಪ್ರಾಕಾರಗಳ ಬಗ್ಗೆ ಮಾತನಾಡಿ ತಮ್ಮ ಕವನಗಳನ್ನು ಓದಿ ಸಾಹಿತ್ಯದ ರಸದೌತಣವನ್ನು ಉಣಬಡಿಸಿದವರು ಎಚ್ಚೆಸ್ವಿ ಅವರು. ಹಾಗೆಯೇ

ಬಿ. ಆರ್ . ಲಕ್ಷ್ಮಣರಾವ್ ಅವರು ತಮ್ಮ ಕಾವ್ಯ ಪಠಣದಿಂದ ಹಾಸ್ಯದ ಹೊನಲನ್ನು ಹರಿಸಿದ್ದು ಇನ್ನೊಂದು ವಿಶೇಷವಾಗಿತ್ತು. ಇಬ್ಬರೂ ಕವಿಗಳ ಒಂದೊಂದು ರಚನೆಯನ್ನು ಸುಶ್ರಾವ್ಯವಾಗಿ ಹಾಡಿದವರು ಕು. ಕನ್ನಿಕಾ ಸಿಂಗಾರ್ ಅವರು.

ಈ ಕಾರ್ಯಕ್ರಮದ ವಿಶೇಷವೆಂದರೆ ಬೆಂಗಳೂರಿನಿಂದ ಬಂದಿದ್ದ ಭ್ರಮರಿ ನೃತ್ಯ ತಂಡದಿಂದ ಶ್ರೇಷ್ಟ ಕವಿಗಳ ಕವಿತೆಗಳ ಆಧಾರದ ಮೇಲೆ ನೃತ್ಯ ರೂಪಕವನ್ನು ನೀಡಿದ್ದು ಒಂದು ಮೆರಗನ್ನೇ ನೀಡಿತ್ತು. ಕಾರ್ಯಕ್ರಮದ ಹೊಣೆಹೊತ್ತಿದ್ದವರು ಸಂಘದ

ಉಪಾಧ್ಯಕ್ಷರಾದ ವಲ್ಲೀಶ ಶಾಸ್ತ್ರಿ ಹಾಗೂ ದತ್ತಾತ್ರಿ ರಾಮಣ್ಣ ಅವರುಗಳು.