Corporate Donations

Most of the companies you work for donates to communities via two programs - Matching gift program and Volunteer hour incentives.

  • Matching gift - Donations to KCA are matched 100-200%

  • Volunteer hours - Volunteering hours spent on KCA activities by company employees are compensation $10-$15 per hours as donation to KCA

Thank you to these companies and our members who work there who have availed of these incentives and helping out KCA. Boeing, Capital Group, Farmers insurance, Southern California Edison, Southern California Gas, Bank of America.

If your company has these kinds of programs, please participate and help with funds for KCA. If you need more information please feel free to contact President dharinidixit.kca@gmail.com or Vice President guru.rao.kca@gmail.com

KCASC EIN: 95-3872468

Whats App Communication

KCASC is now on Whats App. If you would like to receive timely updates please join our group by sending an email to President dharinidixit.kca@gmail.com or Vice President guru.rao.kca@gmail.com with your phone number to get added in to the KCA SC Whats App group.

kca-logo.png

Karnataka Cultural Association - Southern California

ಕರ್ನಾಟಕ ಸಾಂಸ್ಕ್ರತಿಕ ಸಂಘ

NimmaligeKoota.JPG

Dear Members

KCA SC has been closely monitoring the developing situation surrounding the COVID-19 virus. As we all know, the virus is present in Southern California, and guidance from the city and state government partners, is very fluid with new information coming in constantly.

Over the last few days, local and state officials have asked that everyone limit their time spent at public gatherings and in crowds. Also as of  yesterday, California Governor  Gavin Newsom has ordered statewide cancellation of gatherings of 250 or more people.

As a result, we have made the decision to postpone our upcoming Ugadi Habba Program scheduled for April 25th completely until May. 

Please note, we have extended the due dates for program entries till end of March, for North and South Regions. As already informed before, Entries for skits from Central region is closed..

We will continue to monitor and share the dates when it is safe and situation has changed.

- KCA SC BOD

ನಮಸ್ಕಾರ ,

        ಫೆಬ್ರವರಿ ೨೯, ೨೦೨೦ ರ ಸುಗ್ಗಿ ಹಬ್ಬವೂ ತುಂಬ ಸೊಗಸಾಗಿ ಮೂಡಿ ಬಂತು. ಸುಮಾರು ೩೦೦ ಸದಸ್ಯರಿಗಿಂತ ಮೇಲ್ಪಟ್ಟು ಈ ಹಬ್ಬ ಆಚರಿಸಿದೆವು. ಎಳ್ಳು, ಸಕ್ಕರೆಅಚ್ಚು ತಯಾರಿಸಿದ ಶ್ರೀಮತಿ ರಜನಿ ಗೋಪಾಲ್  ಅವರಿಗೆ ನಮ್ಮ ಧನ್ಯವಾದಗಳು.   ಶ್ರೀಮತಿ ಅಪರ್ಣ ಸೀತಾರಾಮ್ ಅವರಿಂದ ವೀಣಾವಾದನದಲ್ಲಿ ದೇವರ ಸ್ತುತಿಯಿಂದ ಕಾರ್ಯಕ್ರಮ ಪ್ರಾರಂಭವಾಯಿತು.ಆರೆಂಜ್ ಕೌಂಟಿ ಪ್ರದೇಶದಿಂದ ಮಕ್ಕಳ ಕಾರ್ಯಕ್ರಮ, ಸೆಂಟ್ರಲ್ ಪ್ರದೇಶದಿಂದ ನೃತ್ಯ ಮತ್ತು ವ್ಯಾಲಿ ಪ್ರದೇಶದಿಂದ ಕಿರುರೂಪಕ ಎಲ್ಲರ ಮನ ರಂಜಿಸಿದವು. ವೈವಿಧ್ಯಮಯ ವೇಷಭೂಷಣ , ವಸ್ತ್ರಾಲಂಕಾರ ಹಾಗು ಸೂಕ್ತ ಧ್ವನಿ, ದೃಷಾಯವಳಿಗಳು ಎಲ್ಲರ ಮನ ಮುಟ್ಟಿತು. ಇಂತಹ

 ಅದ್ಬುತ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಿದ ಎಲ್ಲ ಕಾರ್ಯಕರ್ತರಿಗೆ ಧನ್ಯವಾದಗಳು. 

ಭೀಮಾಸ್ ರೆಸ್ಟೋರೆಂಟ್ ರುಚಿಕಟ್ಟಾದ ಊಟ ಮತ್ತು ಲಘು ಉಪಹಾರ ನಿಮಗೆಲ್ಲ ಮೆಚ್ಚುಗೆ ಆಗಿದೆಯೆಂದು ಭಾವಿಸುತ್ತೆವೆ. ಕಾರ್ಯಕ್ರಮದ ನಿರೂಪಣೆಯನ್ನು ಸುಲಲಿತವಾಗಿ ನಡೆಸಿಕೊಟ್ಟ ಶ್ರೀ ಸುದರ್ಶನ ಮೇಲುಕೋಟೆ ಮತ್ತು ಸಂಧ್ಯಾ ಮಹೇಶ್ ಅವರಿಗೆ ನಮ್ಮ ಧನ್ಯವಾದಗಳು. ಪದ್ಯ ಸ್ಪರ್ಧೆ , ಸಂಗಮ ವಾರ್ಷಿಕ ಸಂಚಿಕೆಯಾ ಮುಖಪುಟ ವಿನ್ಯಾಸ ಸ್ಪರ್ಧೆ ವಿಜೇತರಿಗೆ ಅಭಿನಂದನೆಗಳು.  ಕರ್ನಾಟಕ ಸಾಂಸ್ಕೃತಿಕ ಪ್ರಜ್ಞೆ ಪ್ರಶಸ್ತಿ ವಿಜೇತ  ಅಭೀಷ್ಟ ಉಮೇಶ್ ರವರಿಗೆ   ನಮ್ಮ ಅಭಿನಂದನೆಗಳು. ಕ್ಯಾಂಬ್ರಿಲ್ಲೋ ಹೈ ಸ್ಕೂಲ್ ನ ಡೇವಿಡ್ ಮತ್ತು  ತಂಡದವರಿಗೆ ನಮ್ಮ ಧನ್ಯವಾದಗಳು. ಈ ಕಾರ್ಯಕ್ರಮ ಯಶಸ್ವಿಯಾಗಲು ಸಹಾಯ ಮಾಡಿದ ಎಲ್ಲ ಸ್ವಯಂ ಸೇವಕರಿಗೂ ನಮ್ಮ ಹೃತ್ಪೂರ್ವಕ ಧನ್ಯವಾದಗಳು.

ನಮ್ಮ ಮುಂದಿನ ಕಾರ್ಯಕ್ರಮದ ಪಕ್ಷಿನೋಟ.    

ಯುಗಾದಿ ಹಬ್ಬ ಏಪ್ರಿಲ್ ೨೫ , ಪದಾಧಿಕಾರಿಗಳ ಚುನಾವಣೆ , ಬೈ-ಲಾ ತಿದ್ದುಪಡಿ. 

ವಂದನೆಗಳು

 

-- KCA SC Board

ನಮಸ್ಕಾರ

ನಾಟಕೋತ್ಸವ ೨೦೨೦ ಕಾರ್ಯಕ್ರಮ ವು ಜನವರಿ ೨೬, ೨೦೨೦ರಂದು ಲಾಂಗ್ ಬೀಚ್ ನ ಕ್ಯಾಬ್ರಿಲ್ಲೊ ಹೈಸ್ಕೂಲ್ ನಲ್ಲಿ ನಡೆಯಿತು.   ಸದಸ್ಯರ ಬಹು ಬೇಡಿಕೆಯ ಈ ಕಾರ್ಯಕ್ರಮವು ಎಲ್ಲಾ ಸದಸ್ಯರನ್ನು ಸಂತೋಷಪಡಿಸಿತೆಂದು ಭಾವಿಸಿದ್ದೇವೆ.    ನಾಟಕೋತ್ಸವವನ್ನು ೨೭೦ಕ್ಕೂ ಹೆಚ್ಚು ಸದಸ್ಯರು ಆನಂದಿಸಿದರು.

ತೀರ್ಪುಗಾರರು ಆಯ್ಕೆ ಮಾಡಿದ ೫ ವಿಭಿನ್ನ ನಾಟಕಗಳು ಪ್ರದರ್ಶನ ಗೊಂಡವು,

·  ಶ್ರೀನಿವಾಸ್ ನಂದಕುಮಾರ್ ಅವರು ನಿರ್ದೇಶಿಸಿದ ಸದಾರಮೆ

·  ಶಿವ ಸುಬ್ರಮಣ್ಯ ಅವರು ನಿರ್ದೇಶಿಸಿದ ಕೊಟ್ರಲ್ಲ ಕೈನ

·  ಮಹೇಶ್ ಅಲ್ಲಂಪಲ್ಲಿ ಅವರು ನಿರ್ದೇಶಿಸಿದ ಕಿರಿಕ್ ಕ್ಷೇತ್ರ

·  ಮುರಳಿ ಬಿ ಎಲ್ ಅವರು ನಿರ್ದೇಶಿಸಿದ ಪರಶಿವ

·  ಜಗನ್ನಾಥ್ ಶಂಕಂ ಅವರು ನಿರ್ದೇಶಿಸಿದ ಅತೀತ 

ನಾಟಕಗಳು ಎಲ್ಲರನ್ನು ರಂಜಿಸಿದವು.

ನಾಟಕಗಳನ್ನು ನಿರ್ದೇಶಿಸಿದ ಎಲ್ಲಾ ನಿರ್ದೇಶಕರಿಗೂ , ನಟನಟಿಯರಿಗೂ  ಹಾಗು ಇತರೆ ತಾಂತ್ರಿಕ ವರ್ಗದವರಿಗೂ ಧನ್ಯವಾದಗಳು.

ನಾಟಕಗಳನ್ನು ಆಯ್ಕೆ ಮಾಡಿ, ನಾಟಕೋತ್ಸವದಂದು ನಾಟಕಳನ್ನು ವೀಕ್ಷಿಸಿ,

·   ನಟರತ್ನ-ನಟ (ಅತ್ಯುತ್ತಮ ನಟ) 

·  ನಟರತ್ನ -ನಟಿ (ಅತ್ಯುತ್ತಮ ನಟಿ)

·  ಕಲಾರತ್ನ (ಅತ್ಯುತ್ತಮ ನಿರ್ದೇಶಕ)

·  ರಜತಕಮಲ

·   ಸ್ವರ್ಣ ಕಮಲ

 ಪ್ರಶಸ್ತಿದಾರರನ್ನು ಆಯ್ಕೆ ಮಾಡಿದ ನಾಟಕದ ತೀರ್ಪುಗಾರರಾದ ಅಮೃತ ಬಸವಪಟ್ಣ, ಅಶೋಕ್ ಪಾಟೀಲ್ ಹಾಗೂ  ಜಾಹ್ನವಿ ಐತಾಳ್ ಅವರಿಗೆ ಹೃತ್ಪೂರ್ವಕವಾದ ವಂದನೆಗಳು.

ನಾಟಕೋತ್ಸವ ೨೦೨೦ರ ಫಲಿತಾಂಶ

ನಟರತ್ನ ನಟಿ (ಅತ್ಯುತ್ತಮ ನಟಿ)     - ಇಂದುಮತಿ ಮೋಹನಚಂದ್ರ (ನಾಟಕ - ಅತೀತ)

ನಟರತ್ನ ನಟ (ಅತ್ಯುತ್ತಮ ನಟ)     - ಶ್ರೀನಿವಾಸ್ ಎಮ್ ಎಲ್ (ನಾಟಕ ಅತೀತ)

ಕಲಾರತ್ನ (ಅತ್ಯುತ್ತಮ ನಿರ್ದೇಶಕ)            - ಶಿವ ಸುಬ್ರಮಣ್ಯ (ನಾಟಕ ಕೊಟ್ರಲ್ಲ ಕೈನ)

ರಜತಕಮಲ                                        - ಪರಶಿವ ನಾಟಕ (ನಿರ್ದೇಶನ - ಮುರಳಿ ಬಿ ಎಲ್)

ಸ್ವರ್ಣಕಮಲ                               - ಅತೀತ ನಾಟಕ (ನಿರ್ದೇಶನ - ಜಗನ್ನಾಥ್ ಶಂಕಂ)

 

ನಾಟಕಗಳ ನಡುವೆ ನಡೆದ ಗೀತ ಗಾಯನ ಕಾರ್ಯಕ್ರಮದಲ್ಲಿ ಸಾಕಷ್ಟು ಸದಸ್ಯರು ತಮ್ಮ ಗಾನ ಪ್ರತಿಭೆಯನ್ನು ಪ್ರದರ್ಶಿಸಿದರು. ಈ ಕಾರ್ಯಕ್ರಮದಲ್ಲಿ ಮಕ್ಕಳು ಇಂಪಾಗಿ ಹಾಡಿ ಎಲ್ಲರ ಮನ ಗೆದ್ದರು. ಗೀತ ಗಾಯನದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ  ಮತ್ತು ಸದಸ್ಯರಿಗೂ ಧನ್ಯವಾದಗಳು.

 

ಗೀತಗಾಯನ ಕಾರ್ಯಕ್ರಮಕ್ಕೆ ಗೀತೆಗಳನ್ನು ಆಯ್ಕೆ ಮಾಡಿದ ತೀರ್ಪುಗಾರರು ಪವನ್ ಕುಮಾರ್ ರಾವ್ ಹಾಗು ರಕ್ಷಾರಾವ್ ಅವರಿಗೆ  ನಮ್ಮ ವಂದನೆಗಳು.

ನಮ್ಮ ಸಂಘದ ಪರವಾಗಿ ಕ್ಯಾಬ್ರಿಲ್ಲೊ ಹೈಸ್ಕೂಲೀನ  ಸಿಬ್ಬಂದಿಯೊಡನೆ ಕೆಲಸ ಮಾಡಿ, ನಾಟಕಗಳು ಸುಸೂತ್ರವಾಗಿ ನಡೆಯುವಂತೆ ಮಾಡಿದ ಸುಧೀರ್ ಶಂಕರ್ ಅವರಿಗೆ  ನಮ್ಮ ಧನ್ಯವಾದಗಳು

ಕಾರ್ಯಕ್ರಮವನ್ನು ಅಡೆತಡೆಯಿಲ್ಲದೆ ನಡೆಸಿಕೊಟ್ಟ ದೀಪಾ ನರೇಂದ್ರ ಹಾಗು ಜ್ಯೋತಿ ಪ್ರಕಾಶ್ ಅವರಿಗೂ  ನಮ್ಮ ವಂದನೆಗಳು.

ಹೊಸ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಅಳವಡಿಸಿ, ಸದಸ್ಯರಿಗೆಲ್ಲ ಹಣ ಪಾವತಿಸಲು ಸಹಾಯ ಮಾಡಿದ ಸತ್ಯಪ್ರಸಾದ್ ಅವರಿಗೂ  ಧನ್ಯವಾದಗಳು.

ಎಲ್ಲಾ ನಾಟಕಗಳ, ಎಲ್ಲಾ ಗೀತ ಗಾಯನ ದ ಗಾಯಕರ ಛಾಯಾಚಿತ್ರಗಳನ್ನು ಸೆರೆಹಿಡಿದ ಶಿವು ಗೌಡರ್ ಅವರಿಗೆ ನಮ್ಮ ಧನ್ಯವಾದಗಳು.

 

ಇದಲ್ಲದೆ, ಕಾರ್ಯಕ್ರಮಕ್ಕೆ ಆಗಮಿಸಿ, ನಾಟಕಗಳನ್ನು ಆನಂದಿಸಿ, ಕಾರ್ಯಕ್ರಮದ ಆಯೋಜಕರನ್ನು ಪ್ರೋತ್ಸಾಹಿಸಿದ ಎಲ್ಲ ಸದಸ್ಯರಿಗೆ ಹೃತ್ಪೂರ್ವಕವಾದ ಧನ್ಯವಾದಗಳು

 

ಕಾರ್ಯಕ್ರಮದ ಛಾಯಾಚಿತ್ರಗಳು ಇಲ್ಲಿವೆ.

https://drive.google.com/open?id=1SbTtf5nGmW95vwgJZLn4WVkFz1SJ5MrK

ನಾಟಕೋತ್ಸವ ದ ಬಗ್ಗೆ ಸದಸ್ಯರ ಪ್ರತಿಕ್ರಿಯೆಯ ವಿಡಿಯೋ ಇಲ್ಲಿದೆ 

https://youtu.be/rKkdhwnrK7g 

 

ನಮ್ಮ ಮುಂದಿನ ಕಾರ್ಯಕ್ರಮ ಸುಗ್ಗಿ ಫ಼ೆಬ್ರವರಿ ೨೯, ೨೦೨೦ ರಂದು ಕ್ಯಾಬ್ರಿಲ್ಲೊ ಹೈಸ್ಕೂಲ್ನಲ್ಲಿ ಮತ್ತೆ ಭೇಟಿಯಾಗೋಣ.

 

ವಂದನೆಗಳು

 

--KCA Board

YouTube links of drams performed at Natakotsava

·   ಸದಾರಮೆ

👉https://youtu.be/5b43_B6ZcZA  

·   ಪರಶಿವ

👉   https://youtu.be/v42DnlKGtqI  

·   ಕೊಟ್ರಲ್ಲ ಕೈನ

👉 https://youtu.be/5qJd5h4ERoA  

·    ಕಿರಿಕ್ ಕ್ಷೇತ್ರ

👉https://youtu.be/KWjxg6UIRM0 

·   ಅತೀತ 

👉https://youtu.be/NRB2hodyscA